ಯನ್‍ಕಂಗ್
ಚೀನದ ಪಾನ್‍ಸೀ ಪ್ರದೇಶದ ಬೌದ್ಧ ಗುಹಾಂತರ್ಗತ ಅಲಯಗಳಿರುವ ಒಂದು ಪ್ರವಾಸಿ ಕೇಂದ್ರ. ಇವುಗಳ ನಿರ್ಮಾಣ ಕೆಲಸ ವೇಯ ರಾಜದಂಶದವರ ಆಶ್ರಯದಲ್ಲಿ ಆರಂಭವಾಗಿ ಕ್ರಿ.ಶ 460ರಿಂದ 494ರ ವರೆಗೆ ಮುಂದುವರೆಯಿತು. ಈ ಗುಹಾಲಯಗಳಲ್ಲಿರುವ ಬೌಧ್ದ ಶಿಲ್ಪಕಲೆ ಚೀನದಲ್ಲಿ ಲಭ್ಯವಾಗಿರುವ ಶಿಲ್ಪವಾಗಿರುವ ಶಿಲ್ಪಕಲೆಯ ವಿಕಾಸದ ಪ್ರಾಚೀನ ನಿದರ್ಶನಗಳಾಗಿವೆ. ಮರಳುಗಲ್ಲಿನ ಕಡಿದಾದ ಬಂಡೆಗಳಲ್ಲಿ ಕೊರೆದು ರಚಿಸಿರುವ ಗುಹಾಸಮುಚ್ಚಯದಲ್ಲಿ ಇಪ್ಪತ್ತು ಪ್ರಧಾನಾಲಯಗಳು ಹಲವು ಕಿರುದೇಗುಲಗಳೂ ಇವೆ. ಕ್ರಿ.ಶ. 500-536ರ ಅವಧಿಯಲ್ಲಿ ಪ್ರೌಢವೇಯ ಶೈಲಿಯ ಶಿಲ್ಪಗಳಿಂದ ಕಾಡಿದ ಮತ್ತಪ್ಟು ಮಂದಿರ ಮತ್ತು ಗೂಡುಗಳು ಈ ಸಾಲಿಗೆ ಸೇರ್ಪಡೆಯಾದವು. ಇವುಗಳಲ್ಲಿ ಕೆಲವು ಬೃಹದಾಕಾರದ ಬುದ್ಧಮೂರ್ತಿಗಳಿಗಾಗಿ ಇರುವ ಒಕ್ಕೊಣೆಯಂಥ ರಚನೆಗಳಾದರೆ ಉಳಿದವು ಆರಾಧನಾ ಮಂದಿರಗಳು.

ತಾನ್-ಯಾವೂ ಎಂಬ ಬೌರ್ಧದ ಭಿಕ್ಷು ಕ್ರಿ.ಶ. 4600ರಲ್ಲಿ ಮೊದಲಿನ ಐದು ಪ್ರಧಾನಾಲಯಗಳನ್ನು ಪ್ರತಿಷ್ಠಾಪಿಸಿದ್ದು ಆವೆಲ್ಲ ವೇಯ ಅರಸ ಹಾಗು ಅವನ ನಾಲ್ವರು ಪೂರ್ವಜರಿಗೆ ಅರ್ಪಿತವಾದಕುವು. ಬೌದ್ದ ಧರ್ಮಿಯರಿಗೆ ಕಿರುಕುಳ ಕೊಟ್ಟ ಅರಸರ ಕ್ರಿ.ಶ. 446-52 ಈ ನಿರ್ಮಾಣಗಳ ಪ್ರಾಯೋಯಕವಾದುದು ವಿಶಿಷ್ಟಸಸಂಗತಿ. ಈ ಗುಹೆಗಳಲ್ಲಿ ಬೃಹದಾಕಾರದ ಬುದ್ದ ಮೂರ್ತಿಗಳಿವೆ ಕುಳೀತ ಭಂಗಿಯಲ್ಲಿರವು ಬುದ್ದ ಮೂರ್ತಿಯೊಂದು ಸುಮಾರು 14 ಮೀ ಎತ್ತರವಿದೆ. ಇದರ ಮೂಲ ಮಾದರಿಯನ್ನು ಆಫ್‍ಘಾನಲಿಸ್ತಾನದ ಬಮಿಯಾನ್ ಬಳಿಯಿರುವ ಬೃಹನ್ಮೂರ್ತಿಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಹಾನ್ ಶೈಲಿಯ ಪ್ರಭಾವಕ್ಕೊಳಗಾಗಿ ಒಪಾರಂಪರಿಕವಾಗಿ ಉಳಿದು ಬಂದಿದ್ದ ಚೀನೀ ಶಿಲ್ಪಶೈಲಿಯ ಇದರಿಂದ ಮತ್ತಷ್ಟು ಪ್ರಭಾವಿತರಾಗಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಿತ್ತು. ಪ್ರಧಾನಾಲಯ ಸಮುಚ್ಚಯದ ಕೊನೆಯ ಆರು ಗುಹಾಲಯಗಳು ವಿಕಾಸ ಹೊಂದಿದ ಇ ಶೈಲಿಗೆ ನಿದರ್ಶನಗಳಾಗಿವೆ. ಇಲ್ಲಿ ನಡುವಣ ಸ್ಪಂಭವೊಂದನ್ನು ಮರದ ಪಗೊಡದಂತೆ ಕೆತ್ತಲಾಗಿದೆ. ಗೋಡೆಗಳ ಮೇಲೆ ಬುದ್ಧ, ಆಥನ ಜೀವಿತಕ್ಕೆ ಸಂಬಂಧಿಸಿದ ದೃಶ್ಯಗಳು, ಸಂಗೀತಗಾರರು ಇತ್ಯಾದಿ ಶಿಲ್ಪಗಳನ್ನು ಕಾಣಬಹುದು. ಈ ಶೈಲಿ ರೇಖಾಪ್ರಧಾನವಾದುದು. ಒಟ್ಟಿನಲ್ಲಿ ಇವು ಚೀನೀ ಬೌದ್ಧಕಲೆಗೆ ಒಳ್ಳೆಯ ಉದಾಹರಣೆಗಳು.
 (ನೋಡಿ- ಚೀನೀ-ಶಿಲ್ಪ)						
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ